ತುಂಟಶೀನನ ತ್ರಿಪದಿಗಳು


ಪ್ರೀತಿಯ ಓದುಗರೆ ಅತಿ ಶೀಘ್ರದಲ್ಲಿ ನನ್ನ ಚೊಚ್ಚಲ ಸಾಹಿತ್ಯ ಕ್ರುತಿಯೊಂದನ್ನು ಬಿಡುಗಡೆ ಮಾಡಲಿದ್ದೇನೆ. ಅದರ ಶೀರ್ಶಿಕೆ ತುಂಟಶೀನನ ತ್ರಿಪದಿಗಳು.

ಮುನ್ನುಡಿ
      ತ್ರಿಪದಿ ಕನ್ನಡದ ದೇಸೀ ಛಂದಸ್ಸು ಕನ್ನಡದ ಜಾಯಮಾನಕ್ಕೆ ಹೊಂದಿಕೊಂಡು, ಅಭಿವ್ಯಕ್ತಿಗೆ ಸುಲಭವೂ, ಸರಳವೂ ಆದ ಮಾದ್ಯಮ ಹಾಗಾಗಿ ಕನ್ನಡ ಜನಪದ ಸಾಹಿತ್ಯದಲ್ಲಿ ವಿಪುಲವಾದ ತ್ರಿಪದಿಯ ಬೆಳೆಯನ್ನು ನೋಡಬಹುದು. ಅನಕ್ಷರಸ್ತ ಗ್ರಾಮೀಣ ಬದುಕಿನ ಹಿನ್ನೆಲೆಯ ತಾಯಂದಿರು ತಮ್ಮಬದುಕಿನ ನೋವು ನಲಿವುಗಳನ್ನು ಸಮರ್ಥವಾಗಿ ತ್ರಿಪದಿಯಲ್ಲಿ ಕಟ್ಟಿಕೊಟ್ಟರು. ತ್ರಿಪದಿ ಗಾತ್ರದಲ್ಲಿ ವಾಮನನಾದರೂ ಅರ್ಥವಿಸ್ತಾರದಲ್ಲಿ ವೀರಾದ್ರೂಪವನ್ನು ಹೊಂದಿತರುತ್ತದೆ.ಕಿರಿದರಲ್ಲಿ ಹಿರಿದರ್ಥವನ್ನು ಹೊಂದಿರುವ ಸುಭಾಷಿತಗಳು ಭಾರತೀಯ ಸಾಹಿತ್ಯದಲ್ಲಿ ಅದರಲ್ಲೂ ಸಂಸ್ಕೃತ ಭಾಷೆಯಲ್ಲಿ ಸಂಮೃದ್ಧವಾಗಿವೆ. ಅವು ಮುಕ್ತಕಗಳೆಂದೇ ಪ್ರಸಿದ್ಧವಾಗಿವೆ. ಮುಕ್ತಕಗಳನ್ನು ಹೊಲುವ ತ್ರಿಪದಿಗಳು ಕನ್ನಡದಲ್ಲಿ ಶ್ರೀಮಂತವಾಗಿವೆ. ಸರ್ವಜ್ಞನಂತಹ ನಾಡಾಡಿಯು ಸಹ ಲೋಕದ ಜನರ ಬಾಗು ಬೀಗು ಬಿನ್ನಾಣಗಳನ್ನು ತ್ರಿಪದಿಯಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ. ಜಯದೇವಿತಾಯಿ ಲಿಗಾಡೆಯಂತಹ ಅನುಭಾವಿಗಳು ಕರ್ಮಯೋಗಿ ಸಿದ್ದರಾಮನ ಬದುಕನ್ನು ತ್ರಿಪದಿ ಛಂದಸ್ಸಿನ ಮಹಾಸ್ವರೂಪದಲ್ಲಿ ಹಿಡಿದಿಟ್ಟಿದ್ದಾರೆ, ನಮ್ಮ ನಡುವಿನ ಹಳ್ಳಿಮುಕ್ಕಯುಗಧರ್ಮ ರಾಮಣ್ಣ ತನ್ನದೇಆದ ಗ್ರಾಮ್ಯ ಭಾಷೆಯ ಸೊಗಡಿನಲ್ಲಿ ವಿಶಿಷ್ಟ ನುಡಿಗಟ್ಟುಗಳಿಂದ ಸಾವಿರಾರು ತ್ರಿಪದಿಗಳನ್ನು ರಚಿಸಿದ್ದಾರೆ.
ಮೂಲತಃ ಶ್ರೀನಾಥ್ ಶೇಜವಾಡ್ಕರ್ ಕುಶಲಕರ್ಮಿ. ಬೆಳ್ಳಿ ಬಂಗಾರದಲ್ಲಿ ಕುಸುರಿ ಕೆಲಸದಲ್ಲಿ ನಿಪುಣರು. ಸದಾ ಕುಲುಮೆಯ ಮುಂದೆ ಚಿಮುಟದ ಸಹವಾಸದಲ್ಲಿದ್ದವರಿಗೆ ಕಾವ್ಯ ಕನ್ನಿಕೆ ತ್ರಿಪದಿ ಮುಟ್ಟುಗಳಲ್ಲಿ ಕೈಹಿಡಿದಿರುವುದು ಕನ್ನಡ ಕಾವ್ಯ ಪ್ರಪಂಚದಲ್ಲಿ ಒಂದು ಸೂಜಿಅದ ಸಂಗತಿ.
ಶ್ರೀನಾಥ್ ತನ್ನ ಅನುಭವ ಅನುಭಾವಗಳನ್ನು ಆಡುಮಾತಿನಷ್ಟೇ ಸರಾಗವಾಗಿ ತ್ರಿಪದಿಯಲ್ಲಿಯೇ ಸಂವಹನ ಸಾಧಿಸಬಲ್ಲವರಾಗಿದ್ದಾರೆ.ಅವರ ಪ್ರಥಿಬೆ ಮತ್ತು ಕಾವ್ಯ ಕುಸುರಿಗಾರಿಕೆಯ ಕಲಾತ್ಮಕತೆಗೆ ಅನೇಕ ತ್ರಿಪದಿಗಳನ್ನು ಇಲ್ಲಿ ಉದಾಹರಿಸಬಹುದು
                          
                                     ತಂದೆಯವರಿಲ್ಲವೇ ಎಂಬ ಪ್ರಸ್ನೆಗೆ ಕಂದ
                                     ತಂದೆ ಪದದ ಅರ್ಥವನ್ನು ಅಂತರ್ಜಾಲದಲ್ಲಿ ಹುಡುಕಿ
                                     ಡ್ಯಾಡಿ ಒಳಗಿಹರೆಂದ - ತುಂಟ ಶೀನ
ಕಾಲದ ಮಹಿಮೆ ಇದು. ಇಂದಿನ ಕನ್ನಡ ಹಾಗು ಕನ್ನಡದ ಕಂದಮ್ಮಗಳ ಸ್ಥಿತಿಯನ್ನು ಏಕಕಾಲಕ್ಕೆ ಅತ್ಯಂತ ಮೊನಚಾಗಿ ಈ ತ್ರಿಪದಿ ತಿವಿಯುತ್ತದೆ.    
     ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅರ್ಹರಿದ್ದರೂ ಅವರಿಗೆ ದೊರೆಯಬೇಕಾದ ಸ್ಥಾನ ದೊರೆಯದೇ ಅನರ್ಹರೇ ವಿಜೃಂಬಿಸುತ್ತಿರುವುದಕ್ಕೆ ಕವಿಯ ಪ್ರತಿಸ್ಪಂದನ ಹೀಗಿದೆ.
                                    ಒಪ್ಪಿಸಿರಿ ಅಧಿಕಾರ ಯೊಗ್ಯತ್ತೆಗೆ ತಕ್ಕಂತೆ 
                                    ಉಪ್ಪರಿಗೆಯಲಿ ಇಟ್ಟು ಮೆರೆಸಿದರೂ ಹುಂಜಗಳು
                                    ತಿಪ್ಪೆ ಕೆರೆಯದೆ ಬಿಡವು - ತುಂಟಶೀನ
ಈ ತ್ರಿಪದಿಯಲ್ಲಿ ಬಸವಣ್ಣನವರ ಓಡೆತ್ತ ಬಲ್ಲದು ಅವಲಕ್ಕಿ ಸವಿಯ ಕೋಡಗ ಬಲ್ಲುದೆ ಸೆಳೆಮಂಚದ ಸುಖವ.  ಎಂಭ ವಚನವನ್ನು ನೆನಪಿಸುತ್ತದೆ.
ಶತಮಾನಗಳಿಂದ ದೇವರ ಹೆಸರಿನಲ್ಲಿ,ಜಾತ್ರೆಯ ನೆಪದಲ್ಲಿ, ಕೋಳಿ ಕುರಿಗಳನ್ನು ಬಲಿಕೊಡುವ ಪದ್ದತಿ ರೂಢಿಯಲ್ಲಿದೆ ಅದಕ್ಕೆ ಕವಿ
                                    ತಳಿರು ತೋರಣ ಕಟ್ಟಿ ಡೊಳ್ಳು ವಾದ್ಯವ ತಟ್ಟಿ
                                    ಕೋಳಿ ಕುರಿ ಕೋಣಗಳ ಮಾರಣವ ನಡೆಸಿದೊಡೆ
                                    ದೇವಿ ಒಲಿವಳೆ ನಿನಗೆ - ತುಂಟಶೀನ (೧೯೦)
ಎಂದು ಪ್ರಸ್ನಿಸುತ್ತಾರೆ. ಕವಿ ನರಶಿಂಹಸ್ವಾಮಿ ಒಂದುಕಡೆ ಹೆಂಡತಿಯನ್ನ ಗ್ರುಹಲಕ್ಷ್ಮಿ ಎಂದು ಕರೆದಿದ್ದಾರೆ. ಇಲ್ಲಿ
                            
                                     ಮುಂಜಾವಿನಲಿ ಎದ್ದು ಅಂಗಣವ ಶುಚಿಗೊಳಿಸಿ
                                     ರಂಗವಲ್ಲಿಯನಿಟ್ಟು ರವಿಕಿರಣ ರಂಜಿಸುವ
                                     ಅಂಬೆಗೆ ಶರಣೆಂಬೆ - ತುಂಟಶೀನ
ಎಂದಿದ್ದಾರೆ. ಇನ್ನೊಂದೆಡೆ ವ್ಯಭಿಚಾರ ಮತ್ತು ಅದರಿಂದ ದೊರಕುವ ಛಲವನ್ನು ಕುರಿತು
                                     ರೊಕ್ಕದಾಸೆಗೆ ಪಕ್ಕ ಮಲಗುವವಳಾ ಚಲುವು
                                     ರಕ್ಕಸದ ರೋಗಗಳ ತೆಕ್ಕಿ ಹಾಕಿದ ಮಲವು
                                     ಪುಕ್ಕಟೆಗೂ ಅಪ್ಪದಿರು - ತುಂಟಶೀನ (೧೭೫)
ಎಂದು ಎಚ್ಚರಿಸುತ್ತಾರೆ.
                                                                                     - ನಾಗರಾಜ ಸಿರಿಗೆರೆ
                                                                                                       
ಪ್ರತಿಯನ್ನು ಬಯಸುವವರು ಈ-ಮೇಲ್ ಕಳುಹಿಸಿರಿ.
                                                 shreenath_shejwadkar@yahoo.com

3 comments:

  1. chennagive nimma thripadigalu all the best sir

    ReplyDelete
  2. ತಂದೆಯವರಿಲ್ಲವೇ ಎಂಬ ಪ್ರಸ್ನೆಗೆ ಕಂದ
    ತಂದೆ ಪದದ ಅರ್ಥವನ್ನು ಅಂತರ್ಜಾಲದಲ್ಲಿ ಹುಡುಕಿ
    ಡ್ಯಾಡಿ ಒಳಗಿಹರೆಂದ - ತುಂಟ ಶೀನ

    ವಾಸ್ತವವನ್ನು ವಿಡಂಬಿಸಿದ ಬಗೆ ತುಂಬಾ ಚೆನ್ನಾಗಿದೆ ,ಎಲ್ಲ ಕವನಗಳು /ಮುಕ್ತಕಗಳು ಚೆನ್ನಾಗಿವೆ ಅಭಿನಂದನೆಗಳು

    ReplyDelete
  3. ಮುಂಜಾವಿನಲಿ ಎದ್ದು ಅಂಗಣವ ಶುಚಿಗೊಳಿಸಿ
    ರಂಗವಲ್ಲಿಯನಿಟ್ಟು ರವಿಕಿರಣ ರಂಜಿಸುವ
    ಅಂಬೆಗೆ ಶರಣೆಂಬೆ - ತುಂಟಶೀನ
    --ತುಂಬಾ ಚೆನ್ನಾಗಿದೆ :)

    ReplyDelete